ಸೋಮವಾರ, ಆಗಸ್ಟ್ 12, 2013

ನಶೆಯಲ್ಲಿ ಹೃದಯ ಜಾರೀತು ನಿನ್ನ ನೀ ಸಂಭಾಳಿಸು
ನಿಶೆಯಲ್ಲಿ ಹೆಜ್ಜೆ ಎಡವೀತು ನಿನ್ನ ನೀ ಸಂಭಾಳಿಸು

ಇಲ್ಲಿ ನೋವಿನಲ್ಲಳುವರ ಕಂಡು ನಗುವವರೇ ಹೆಚ್ಚು
ಕಣ್ಣೀರು ಕೆನ್ನೆಗಿಳಿಯುವ ಮೊದಲೇ ಸಂಭಾಳಿಸು

ಇಲ್ಲಿ ಮೋಸಕ್ಕೆ ಪ್ರೇಮದ ಹೆಸರಿಡುವವರೆ ಹೆಚ್ಚು
ಎದೆಯ ಮಾತು ತುಟಿಗೆ ಬರುವ ಮೊದಲೇ ಸಂಭಾಳಿಸು

ಇಲ್ಲಿ ಇರಿಯಲೆಂದೇ ತೆಕ್ಕೆ ಬೀಳುವವರು ಹೆಚ್ಚು
ತೋಳು ತೆರೆಯುವ ಮೊದಲೇ ನಿನ್ನ ನೀ ಸಂಭಾಳಿಸು

ಇದು ಹಾದಿ ತಪ್ಪಿದವನ ಹಾಡು ತಪ್ಪೇ ಹೆಚ್ಚು
ಲಯ ತಪ್ಪುವ ಮೊದಲೇ ನೀ ನನ್ನ ಸಂಭಾಳಿಸು

-ಕೆಂಚನೂರಿನವ

1 ಕಾಮೆಂಟ್‌:

  1. ನಿಜ ಗೆಳೆಯ
    "ಇಲ್ಲಿ ಇರಿಯಲೆಂದೇ ತೆಕ್ಕೆ ಬೀಳುವವರು ಹೆಚ್ಚು"
    ನಮಗೂ ಯಾರಾದರೂ ಬೇಕು,
    "ಲಯ ತಪ್ಪುವ ಮೊದಲೇ ನೀ ನನ್ನ ಸಂಭಾಳಿಸು"

    ಪ್ರತ್ಯುತ್ತರಅಳಿಸಿ