ಸೋಮವಾರ, ಆಗಸ್ಟ್ 19, 2013

ಕೆಂಪು ಮಣ್ಣಿನ ಮೇಲೆ
ಬಿಳಿಯ ಪಾರಿಜಾತ
ಕಂಪಿಸುವ ಕೈಯಿಂದ
ಹೆಕ್ಕಿ ತಂದಿರುವೆನು
ಬಾಡುವ ಮುನ್ನವೇ
ಒಪ್ಪಿಸಿಕೊ ಗೆಳತಿ

ಕೆಂಪು ಅಂಗೈಯ ನಡುವೆ
ಕಂಪ ಬೀರುವ ಹೂವು
ಇನ್ನಾರಿಗೊಪ್ಪೀತು ಹೇಳು
ಬಾಡಿಹೋಗುವ ಮೊದಲೇ
ಮಾಲೆ ಮಾಡಿಕೊ ಗೆಳತಿ

ಪಾರಿಜಾತವ ಮರುಳು
ಮಾಡಿಹುದು ನಿನ್ನ ಕೇಶರಾಶಿ
ಒಪ್ಪವಾಗಿಟ್ಟಂತೆ ಕಪ್ಪು
ಮೋಡದ ರಾಶಿ
ಮುಡಿದುಕೊ ಗೆಳತಿ
ಬಾಡುವ ಮೊದಲೇ

-ಕೆಂಚನೂರಿನವ

1 ಕಾಮೆಂಟ್‌:

  1. ನನ್ನ ಹಳ್ಳಿಗಾಡಿನ ಬಾಲ್ಯ. ಗೆಳತಿಯರಾದ ಪದ್ದಿ, ಯಮುನ, ಯಾದಮ್ಮ, ಇಂದಿರ, ಮೀನಾಚ್ಚಿ, ಜಾಲೀ ನೆನಪಾದರೂ....

    ಪ್ರತ್ಯುತ್ತರಅಳಿಸಿ