ಶನಿವಾರ, ಜುಲೈ 20, 2013

ನೆನಪಿದೆಯೇನೆ ಗೆಳತಿ ನಿನಗೆ ?
ನೆನಪಿದೆಯೇನೆ?
ಚಿಕ್ಕ-ಚಿಕ್ಕ ಗಲ್ಲಿಗಳಲ್ಲಿ
ದೊಡ್ಡ-ದೊಡ್ಡ ಕನಸುಗಳ
ಬೆವೆತ ಅಂಗೈಗಳ ನಡುವಿನಲ್ಲಿಟ್ಟುಕ
ೊಂಡು
ಓಡಾಡಿದ್ದು ನೆನಪಿದೆಯೇನೆ?

ಚಿಕ್ಕ-ಚಿಕ್ಕ ಖುಷಿಗೂ
ಕಣ್ಣು ಹನಿಯುವವರೆಗೂ
ದೊಡ್ಡದಾಗಿ ನಕ್ಕಿದ್ದು
ನೆನಪಿದೆಯೇನೆ?

ಬಂದ ಬಸ್ಸು ಬೇಕೆಂದೇ ಬಿಟ್ಟು
ನಿನ್ನ ಸಾಂಗತ್ಯಕ್ಕೆ ಹಂಬಲಿಸುತ್ತಾ
ಇನ್ನೊಂದು ಬಸ್ಸಿಗೆ ಕಾದಿದ್ದು
ನೆನನಪಿದೆಯೇನೆ ನಿನಗೆ ?

ಇಬ್ಬರೂ ಸೇರಿ ಕಟ್ಟಿದ
ಪಾರಿಜಾತದ ಮಾಲೆ,ನೀನು
ಇನ್ನೊಬ್ಬನ ಕೊರಳಿಗೆ ಹಾಕಿದ್ದು
ಸರಿಯೇನೆ ಗೆಳತಿ ಸರಿಯೇನೆ?
-ಕೆಂಚನೂರಿನವ

1 ಕಾಮೆಂಟ್‌:

  1. ಗೆಳತಿ ಯಾಕಮ್ಮ ಹೀಗೆ ಮಾಡಿದೆ?

    ಬಸ್ಸಿನ ಕಥೆ ಓದುವಾಗ ನನಗೆ ಬೆಂಗಳೂರಿನ ಕೆ.ಆರ್. ಸರ್ಕಲ್ ಬಸ್ ಸ್ಟಾಪ್ ನೆನಪಾಯಿತು.

    ಪ್ರತ್ಯುತ್ತರಅಳಿಸಿ