ಬುಧವಾರ, ಜುಲೈ 17, 2013

ಎಲ್ಲೂ ಹೋಗದ ರಸ್ತೆ
ಎಷ್ಟೋ ಜನರನ್ನು ಎಲ್ಲೆಲ್ಲೋ ಸೇರಿಸಿದೆ
*
ರಸ್ತೆಬದಿಯ ಮರದ ನೆರಳಿಗೆ ಮರುಳಾದರೆ;
ಮನೆಸೇರುವುದು ಕಷ್ಟ
*
ಕಾಲುದಾರಿ ಮಾಡು
ಮುಂದೆ ಹೆದ್ದಾರಿಯಾಗುತ್ತದೆ
*
ಮನೆ ತಲುಪಬೇಕೆ?
ಒಳ್ಳೆಯ ದಾರಿಯಲ್ಲಿ ಹೋಗು
*
ಹೊಸ ರಸ್ತೆಯುದ್ದಕ್ಕೂ ಹಳೆಯ ಹೆಜ್ಜೆಯ
ಅಸ್ಪಷ್ಟ ಗುರುತುಗಳು
*
�ಉಲ್ಲಾಸ ದಾರಿಯಲ್ಲಿದೆ;
ಕೆಟ್ಟದಾರಿ ತಲುಪಿಸಿದ ಗುರಿ
ಖುಷಿ ಕೊಡುವುದಿಲ್ಲ;
*
ಸುಮ್ಮನೇ ನಿಂತ ಕೈಕಂಬ;
ದಾರಿಹೋಕರಿಗೆ ದಿಕ್ಕುತೋರಿಸುತ್ತದೆ
*
ಗುರಿಯ ಖಾತರಿ
ಯಾರೂ ಕೊಡಲಾಗದು;
ಪಯಣವನ್ನ ಪ್ರೀತಿಸು ನಡೆದ
ಖುಷಿಯಾದರೂ ಜೊತೆಗಿರಲಿ
-ಕೆಂಚನೂರಿನವ

1 ಕಾಮೆಂಟ್‌:

  1. "ಹೊಸ ರಸ್ತೆಯುದ್ದಕ್ಕೂ ಹಳೆಯ ಹೆಜ್ಜೆಯ
    ಅಸ್ಪಷ್ಟ ಗುರುತುಗಳು"
    ಇದನ್ನೇ ಕವಿತೆಯಾಗಿಸಿ. ನಮಗಾಗಿ.

    ಪ್ರತ್ಯುತ್ತರಅಳಿಸಿ