ಸೋಮವಾರ, ಜುಲೈ 29, 2013

ಕಾಡಿನಲ್ಲರಳಿದ ಹೂ ;
ನಾ ಬರೆದ ನೀ ಓದದ ನಿನ್ನ ಕವಿತೆ

*

ಇಲ್ಯಾರೋ ಹಚ್ಚಿದ ಹಣತೆ
ಅಲ್ಲೆಲ್ಲೋ ಒಸರುವ ಒರತೆ
ದಾರಿ ಸಾಗಿದೆ ಮುಗಿಯದೆ
ನೀನಿಲ್ಲವೆಂಬ ಕೊರತೆಯ ಹೊರತು

*

ನೀನು ದೇವತೆಯಂತವಳು ಅಂದಿದ್ದೇ ತಪ್ಪಾಯ್ತು;
ದೇವತೆ ಮನುಷ್ಯರಿಗೆ ಒಲಿಯದಂತೆ ಮಾಡುವ ಹುನ್ನಾರ ಇಂದಿನದಲ್ಲ ಬಿಡು

*
ನಿನ್ನ ಮನೆಗೆ ದಾರಿತೋರುವ ಕೈಮರ ಎಲ್ಲಿಯೂ ನೆಟ್ಟಿಲ್ಲವೆಂಬ ಸತ್ಯವೇ ಅದನ್ನು ಹುಡುಕಲು ನನಗಿರುವ ಪ್ರೇರಣೆ

*

ಎಲ್ಲ ಫಲಕಗಳನ್ನೂ ತಿರಸ್ಕರಿಸುತ್ತಾ ಮುಂದೆ ಸಾಗಿದೆ, ಈಗ ಆ ದಾರಿಯಲ್ಲಿ ನನ್ನ ಹೆಸರಿನಲ್ಲೊಂದು ಫಲಕ ನೆಡಲಾಗಿದೆಯಂತೆ

*

ನೀನು ಬದುಕಲ್ಲ,
ಬದುಕಿನ ಸುಂದರ ವ್ಯಾಖ್ಯಾನ

*
ಕಡಲಿಗಿಳಿಯಲು ಬಿಡದ
ಮಳೆ-ಗಾಳಿ
ದೋಣಿಯ ಸವತಿಯರು

-ಕೆಂಚನೂರಿನವ

1 ಕಾಮೆಂಟ್‌:

  1. "ಎಲ್ಲ ಫಲಕಗಳನ್ನೂ ತಿರಸ್ಕರಿಸುತ್ತಾ ಮುಂದೆ ಸಾಗಿದೆ, ಈಗ ಆ ದಾರಿಯಲ್ಲಿ ನನ್ನ ಹೆಸರಿನಲ್ಲೊಂದು ಫಲಕ ನೆಡಲಾಗಿದೆಯಂತೆ" ಮಾರ್ಮಿಕ, ನಮ್ಮ ಅಹಂ ಇಳಿಸಲು ಬರೆದ ಶಾಲೇ ಇದು?

    ಪ್ರತ್ಯುತ್ತರಅಳಿಸಿ