ಸೋಮವಾರ, ಜುಲೈ 22, 2013

ಪಾತ್ರದೊಳಗೇ ಹರಿವ ನೀರಿಗೆ
ಹೊಸದೇನೂ ಎದುರಾಗದು ,
ಅದೇ ದಾರಿ ಅದೇ ಪ್ರಪಾತ
ತನಗಿಂತ ಮೊದಲಿನವರು
ರಚಿಸಿದ ಕೊರಕಲು

ಪ್ರಯೋಜನವಿಲ್ಲ ಅಲ್ಲೇ ಹರಿದು
ದಿಕ್ಕುತಪ್ಪಿ ಹರಿಯಬೇಕು
ಹೊಸದಾರಿ ಹುಟ್ಟಿಸಲು
ಪ್ರವಾಹವಾಗಬೇಕು
ಆಗಲಷ್ಟೇ ಸಾಧ್ಯ
ಜಡ್ಡುಗಟ್ಟಿದ ಬಂಡೆ ಸರಿಸಲು

ಸಮುದ್ರ ಸೇರುವುದೇ
ಗುರಿಯೆಂದುಕೊಂಡರೆ
ಹೊಸದೇನೂ ಹುಟ್ಟದು

ಇಂಗಿದರೂ ಸರಿ ಅರ್ಧದಲಿ
ಹೊಸಹಾದಿಯ ಕನಸಲ್ಲಿ
ಮತ್ತೆ ಮುಂದುವರಿಸುವುದು
ಹಿಂಬಾಲಿಸಿ ಬರುವ ನೀರು

ಕಡಲೊಂದೇ ಗುರಿಯೆಂದುಕೊಂಡ
ನದಿಗಳೇ
ಒಮ್ಮೆ ಹರಿದು ನೋಡಿ ಪಾತ್ರದಾಚೆಗೂ

-ಕೆಂಚನೂರಿನವ

1 ಕಾಮೆಂಟ್‌:

  1. ಪಾತ್ರದಾಚೆಗೂ ಹರಿದರೆ ಗೆಳೆಯ, ಅದು ನೆರೆ - ಪಾತ್ರದಲ್ಲೇ ಕನಿಕರಿಸಿದರೆ ತುಂಬೀತು ಕೆರೆ!

    ಪ್ರತ್ಯುತ್ತರಅಳಿಸಿ