ಗುರುವಾರ, ಮಾರ್ಚ್ 13, 2014

ಮುಂಜಾನೆಯ ಬಿಡಿ ಚಿತ್ರಗಳು


ಹನಿ ಭಾರಕ್ಕೆ
ಬಾಗಿದ ಗರಿಕೆಗೆ
ರವಿಯ ಧ್ಯಾನ
*
ಗುಬ್ಬಿ ಹೆಜ್ಜೆ ಗುರುತು
ದಾಸವಾಳ
ಗಿಡದಡಿ
ಗುರುತಿಸಿದ್ದೀರಾ?
*
ಯಾವ ಹೂವೆಂದರೆ
ಆ ಹೂವು
ಹೀರುವ ಹಕ್ಕಿ
ಬೆಕ್ಕಿಗೆ
ಒಂದೆಡೆ ನಿಲ್ಲಲಾಗುತ್ತಿಲ್ಲ
*
ಅಮ್ಮ
ಎಷ್ಟು ಹೊಗೆ
ಹಾಕಿದರೂ
ಮನೆ
ದೇವರು ಕೆಮ್ಮುವುದಿಲ್ಲ!
*
ದೋಸೆಯ
ಪರಿಮಳ ಕೆಡಿಸುವ
ಅಗರಬತ್ತಿ ವಾಸನೆ
*
ಈಗಷ್ಟೇ ಮಿಂದ
ಅವಳ
ಬೆನ್ನು ತೋರಿಸುವ
ತುಂಟ ಕೂದಲು
*
-ಕೆಂಚನೂರಿನವ

1 ಕಾಮೆಂಟ್‌:

  1. ಆರೂ ಹನಿಗಳು ಇಷ್ಟವಾದವು.
    ಮೊದಲನೆಯ ಹನಿಯು ನಿಮ್ಮ ಪಳಗಿದ ಕವಿ ಹೃದಯಕ್ಕೆ ಸಾಕ್ಷಿಯಾಗಿದೆ.
    ಗುಬ್ಬಿ ದಾಸವಾಳ, ಅಮ್ಮನ ಒಲೆಗಳು ಮರಳಿ ಬಾಲ್ಯಕ್ಕೆ ಎಳೆದೊಯ್ದವು.

    ಒಟ್ಟಾರೆಯಾಗಿ welcome back.

    ಪ್ರತ್ಯುತ್ತರಅಳಿಸಿ