ಗುರುವಾರ, ಮಾರ್ಚ್ 20, 2014

ಹನಿಗಳು

ಸಾಕಷ್ಟು ತಯಾರಿ
ಮಾಡಿಯೇ ಬಂದಿದ್ದರೂ
ಕೊನೆಗೆ
ವಿದಾಯದ ಮಾತುಗಳಿಗೆ
ಕಣ್ಣುಗಳನ್ನೇ ಆಶ್ರಯಿಸಿದ್ದಾಯ್ತು
*
ರೈಲು ನಿಲ್ಲದ ನಿಲ್ದಾಣದಲ್ಲಿ
ಮುದುಕರಿಬ್ಬರ ಮಾತುಕತೆ
ನಿಂತ ಗಡಿಯಾರದಲ್ಲಿ
ಕಾಲ ಹಿಂದಕ್ಕೆ ಚಲಿಸುತ್ತಿದೆ

*
ತುಕ್ಕು ಹಿಡಿದ
ದೂರವಾಣಿ ತಂತಿಗಳ ಮೇಲೆ
ಹಕ್ಕಿಗಳೆರಡರ ಸಂಭಾಷಣೆ

*
ದಾಸವಾಳ ಗಿಡದ ಕೆಳಗೆ
ಕೆಲವು ಗುಬ್ಬಿ ಗರಿಗಳು;
ಉದುರಿದ ಹೂವು
ತುಸು ಹೆಚ್ಚೇ ಕೆಂಪಾಗಿದೆ

*

ಗುಬ್ಬಿಯ ಅಕ್ಕಿ ಬಟ್ಟಲು
ಖಾಲಿಯಾಗದೆ ಉಳಿದಿದೆ ;
ಬೆಕ್ಕು ಸಂತೃಪ್ತಿಯಿಂದ
ಮುಖ ತಿಕ್ಕಿಕೊಳ್ಳುತ್ತಿದೆ

*
ಪಂಜರ ತೆರೆದಿಟ್ಟೆ
ಹಕ್ಕಿ
ಮತ್ತೆ ಬಂದು
ಒಳಗೇ ಕುಳಿತುಕೊಂಡಿತು;
ಅಭ್ಯಾಸವಾಗಿದೆ ಹಕ್ಕಿಗೆ
ಪ್ರೀತಿ , ಬಂಧನ , ಗುಲಾಮಿತನ
ಅಥವಾ...

-ಕೆಂಚನೂರಿನವ

3 ಕಾಮೆಂಟ್‌ಗಳು:

  1. ಮೊದಲ ಹನಿಯಲ್ಲಿನ ನೋವಿನ ಸಾಂದ್ರತೆ, ಎರಡನೇ ಹಾನಿಯ ಮಲ್ಲೇಶ್ವರಂ ರೈಲ್ವೇ ನಿಲ್ದಾಣದ ದೃಶ್ಯ ಮತ್ತು ಕಡೆಯ ಹನಿಯ 'ಬಂಧನ' ಬದುಕಿನ ಬಿಡಲಾರದ ಭಾವಗಳು.

    ಪ್ರತ್ಯುತ್ತರಅಳಿಸಿ
  2. ಮನ ಮುಟ್ಟುವ ಹನಿಗೊಂಚಲು, ಗುಬ್ಬಿಗಳಷ್ಟೇ
    ಪುಟ್ಟದಾದ ಚೊಕ್ಕ ಮಾಲಿಕೆ !!

    ಪ್ರತ್ಯುತ್ತರಅಳಿಸಿ
  3. ಎಲ್ಲ ಹನಿಗಳೂ ಚೆನ್ನಾಗಿವೆ .
    ಪರಿಣಾಮಕಾರಿಯಾಗಿ ದೃಶ್ಯವನ್ನು ಕಟ್ಟಿಕೊಡುತ್ತವೆ

    ಪ್ರತ್ಯುತ್ತರಅಳಿಸಿ