ಗುರುವಾರ, ಜೂನ್ 13, 2013

ಸಂತೆಯಲ್ಲೊಂದು ಏಕಾಂತ
ಸೃಷ್ಟಿಸಿಕೊಳ್ಳಲು ನಿನಗಷ್ಟೇ ಸಾಧ್ಯ
ಓ ಬರಿಗಾಲ ಫಕೀರನೇ...
ನನಗೂ ಹೇಳಿಕೊಡು
ಜಗದ ನೆಂಟನಾಗಿಯೂ
ಅಂಟುಳಿಸಿಕೊಳ್ಳದೆ ಬದುಕುವುದನ್ನ
ಖಾಲಿ ಜೋಳಿಗೆಯೊಂದಿಗೆ
ಹೊರಡಬೇಕು ನಾನು ಅಲೆಮಾರಿಯಂತೆ,
ಥೇಟ್ ನಿನ್ನಂತೆ

-ಕೆಂಚನೂರಿನವ

2 ಕಾಮೆಂಟ್‌ಗಳು:

  1. ಫಕೀರಣ ಮನಸ್ಥಿತಿ ನಮಗೂ ಸಂಪ್ರಾಪ್ತವಾಗಲಿ. :)

    ಪ್ರತ್ಯುತ್ತರಅಳಿಸಿ
  2. ಜೋಗಿಯ ಜೋಳಿಗೆ ತು೦ಬೆಲ್ಲಾ ವೈರಾಗ್ಯವೋ? ಅಥವಾ ತಾನಾರೆ೦ದು ತಿಳಿಯಲು ನಡೆಸುತಿರುವ ಸ೦ಚಾರವೋ?

    ಪ್ರತ್ಯುತ್ತರಅಳಿಸಿ