ಶನಿವಾರ, ಜೂನ್ 8, 2013

1)
ಸಾಕಿ ಹೇಳಿದ್ದು
ಯಾ ವ ಮಧುವೂ ರುಚಿಸದು
ಎದೆಯಲ್ಲಿ ನೋವಿಲ್ಲದೆ

2)
ನೀನು ಕಣ್ಮುಚ್ಚಿ
ನಿದ್ರಿಸುವುದನ್ನೇ ಕಾಯುತ್ತಿವೆ
ನಕ್ಷತ್ರಗಳು:
ಬಿಡು,ಅವೂ ಹೊಳೆಯಲಿ
ಒಂದಷ್ಟು ಹೊತ್ತು ಕತ್ತಲಲಿ

3)
ನೋವಿಲ್ಲದೆ ಕುಡಿದೆ,
ಅಪಚಾರವಾಯ್ತು ಮಧುವಿಗೆ.
ಕ್ಷಮೆಯಿರಲಿ ಸಾಕಿ

4)
ಕುಡುಕರಾದರೆ ಅಪರಾಧವಲ್ಲ,
ಕೆಡುಕರಿಗೇನೆ ಕ್ಷಮೆಯಿದೆ
ಕುಡುಕರಿಗಿಲ್ಲವೆ?

5)
ಇವಳು ಪಲುಕುವ ಪಿಸುನುಡಿಗಳು
ಮಧುವಿನಷ್ಟೇ ಅಮಲೇರಿಸುತ್ತಾವೆ,
ನಂಬಿ, ನಾನೀಗ ಕುಡಿದಿಲ್ಲ

6)
ಇವಳ ಬಾಗು-ಬಳುಕುಗಳನ್ನು
ಇಂದ್ರ ಛಾಪಕ್ಕೆ ಹೋಲಿಸದಿರಿ,
ಇವಳಲ್ಲಿವೆ ಏಳಕ್ಕೂ ಮಿಕ್ಕಿ ಬಣ್ಣ

7)
ಕುಡಿದವನಿಗೆ
ನೆಲವೇ ತೊಟ್ಟಿಲು
ತೂಗುತ್ತದೆ ನಡೆವಾಗಲೂ

-ಕೆಂಚನೂರಿನವ

1 ಕಾಮೆಂಟ್‌:

  1. ನನಗೆ ಎಲ್ಲ ನೆಚ್ಚಿಗೆಯಾದವು ಮುಖ್ಯವಾಗಿ - ಕಾವ್ಯಾತ್ಮಕವಾಗಿ :
    "ಇವಳ ಬಾಗು-ಬಳುಕುಗಳನ್ನು
    ಇಂದ್ರ ಛಾಪಕ್ಕೆ ಹೋಲಿಸದಿರಿ,
    ಇವಳಲ್ಲಿವೆ ಏಳಕ್ಕೂ ಮಿಕ್ಕಿ ಬಣ್ಣ"

    ಪ್ರತ್ಯುತ್ತರಅಳಿಸಿ